ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ ನಿನ್ನ ಮುಗಿಲ ಸಾಲೇ ಧರೆಯ ಕೊರಳ ಪ್ರೇಮದ ಮಾಲೆ ಸುರಿವ ಒಲುಮೆಯ ಜಡಿ ಮಳೆಗೆ ಪ್ರೀತಿ ಮೂಡಿದೆ ಯಾವ ಚಿಪ್ಪಿನಲ್ಲಿ ಯಾವ ಹನಿಯು ಮುತ್ತಾಗುವುದೋ ಒಲವು ಎಲ್ಲಿ ಕುಡಿಯಿಡೆಯುವುದೋ ತಿಳಿಯದಾಗಿದೆ ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ ಭುವಿ ಕೆನ್ನೆ ತುಂಬ ಮುಗಿಲು ಸುರಿದ ಮುತ್ತಿನ ಗುರುತು ನಿನ್ನ ಎದೆಯ ತುಂಬ ಅವಳು ಬಂದ ಹೆಜ್ಜೆಯ ಗುರುತು ಹೆಜ್ಜೆ ಗೆಜ್ಜೆಯ ಸವಿ ಸದ್ದು ಪ್ರೇಮ ನಾದವೋ ಎಲೆ ಮುಗಿಲಿನಲ್ಲಿ ರಂಗು ಚೆಲ್ಲಿ ನಿಂತಳು ಅವಳು ಬರೆದು ಹೆಸರ ಕಾಮನಬಿಲ್ಲು ಏನು ಮೋಡಿಯೋ ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ ಯಾವ ಹನಿಗಳಿಂದ ಯಾವ ನೆಲವು ಹಸಿರಾಗುವುದೋ ಯಾರ ಸ್ಪರ್ಷದಿಂದ ಯಾರ ಮನವು ಹಸಿಯಾಗುವುದೋ ಯಾರ ಉಸಿರಲ್ಯಾರಾ ಹೆಸರೋ ಯಾರು ಬರೆದರೋ ಯಾವ ಪ್ರೀತಿ ಹೂವು ಯಾರ ಹೃದಯದಲ್ಲರಳುವುದೋ ಯಾರ ಪ್ರೇಮ ಪೂಜೆಗೆ ಮುಡಿಪೂ ಯಾರು ಬಲ್ಲರೋ ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ ಒಲವ ಚಂದಮಾಮ ನಗುತಾ ಬಂದ ಮನದಂಗಳಕೆ ಪ್ರೀತಿ ಬೆಳಕಿನಲ್ಲಿ ಹೃದಯ ಹೊರಟಿದೆ ಮೆರವಣಿಗೆ ಅವಳ ಪ್ರೇಮದೂರಿನ ಕಡೆಗೆ ಪ್ರೀತಿ ಪಯಣವೋ ಪ್ರಣಯದೂರಿನಲ್ಲಿ ಕಳೆದು ಹೋಗೋ ಸುಖವ ಇಂದು ಧನ್ಯನಾದೆ ಪಡೆದುಕೊಂಡು ಹೊಸ ಜನ್ಮವೋ ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆDownload Mungaru Male Lyrics Back to Menu
mungaru maleye enu ninna hanigala leele ninna mugila saale dhareya korala premada maale suriva olumeya jadi malege preethi moodide yaava chippinalli yaava haniyu muttaguvudo olavu elli kudiyideyuvudo thiliyadagide mungaru maleye enu ninna hanigala leele bhuvi kenne thumba mugilu surida muttina guruthu ninna edeya thumba avalu banda hejjeya guruthu hejje gejjeya savi saddu prema naadavo ele mugilinalli rangu chelli ninthalu avalu baredu hesara kamanabillu enu moodiyo mungaru maleye enu ninna hanigala leele yaava hanigalinda yaava nelavu hasiraguvudo yaara sparshadinda yaara manavu hasiyaguvudo yaara usiralyaara hesaro yaaru baredaro yaava preethi hoovu yaara hrudayadallaraluvudo yaara prema poojege mudipo yaaru ballaro mungaru maleye enu ninna hanigala leele olava chandamama nagutha banda manadangalake preethi belakinalli hrudaya horatide meravanige avala premadoorina kadege preethi payanavo pranayadoorinalli kaledu hoogo sukhava indu dhanyanade padedukondu hosa janmavo mungaru maleye enu ninna hanigala leeleDownload Mungaru Male Lyrics Back to Menu
ಕುಣಿದು ಕುಣಿದು ಬಾರೆ ಒಲಿದು ಒಲಿದು ಬಾರೆ ಕುಣಿವ ನಿನ್ನ ಮೇಲೆ ಮಳೆಯ ಹನಿಯ ಮಾಲೆ ಜೀವಕೆ ಜೀವ ತಂದವಳೇ ಜೀವಕ್ಕಿಂತ ಸನಿಹ ಬಾರೆ ಒಲವೇ ವಿಸ್ಮಯ ಒಲವೇ ವಿಸ್ಮಯ ನಿನ್ನ ಪ್ರೇಮ ರೂಪ ಕಂಡು ನಾನು ತನ್ಮಯ ಹುಚ್ಚು ಹುಡುಗ ನೀನು ಬಿಚ್ಚಿ ಹೇಳಲೇನು ಜೀವಕೆ ರೆಕ್ಕೆ ತಂದವನೆ ಬಾನಿಗೇರಿ ಹಾರುವ ಬಾರೋ ಒಲವೇ ವಿಸ್ಮಯ ಇರುಳಲ್ಲಿ ನೀನೆಲ್ಲೋ ಮೈಮುರಿದರೆ ನನಗಿಲ್ಲಿ ನವಿರಾದ ಹೂ ಕಂಪನ ಕಣ್ಣಲ್ಲಿ ನೀ ಕಣ್ಣಿಟ್ಟು ಬರ ಸೆಳೆದರೆ ಮಾತಿಲ್ಲ ಕಥೆಯಿಲ್ಲ ಬರಿ ರೋಮಾಂಚನ ನಿನ್ನ ಕಣ್ಣ ತುಂಬ ಇರಲಿ ನನ್ನ ಬಿಂಬ ಹೂವಿಗೆ ಬಣ್ಣ ತಂದವನೆ ಪರಿಮಳದಲ್ಲಿ ಅರಳುವ ಬಾರೋ ಒಲವೇ ವಿಸ್ಮಯ ಒಲವೇ ನೀನೊಲಿದ ಕ್ಷಣದಿಂದಲೇ ಈ ಭೂಮಿ ಈ ಭಾನು ಹೊಸದಾಗಿದೆ ಖುಷಿಯಿಂದ ಈ ಮನವೆಲ್ಲ ಹೂವಾಗಿದೆ ಬೇರೇನೂ ಬೇಕಿಲ್ಲ ನೀನಲ್ಲದೆ ಕುಣಿದು ಕುಣಿದು ಬಾರೆ ಒಲಿದು ಒಲಿದು ಬಾರೆ ಜೀವಕೆ ಜೀವ ತಂದವಳೇ ಜೀವಕ್ಕಿಂತ ಸನಿಹ ಬಾರೆ ಒಲವೇ ವಿಸ್ಮಯ ಒಲವೇ ವಿಸ್ಮಯ ನಿನ್ನ ಪ್ರೇಮ ರೂಪ ಕಂಡು ನಾನು ತನ್ಮಯ ಹುಚ್ಚು ಹುಡುಗ ನೀನು ಬಿಚ್ಚಿ ಹೇಳಲೇನು ಜೀವಕೆ ರೆಕ್ಕೆ ತಂದವನೆ ಬಾನಿಗೇರಿ ಹಾರುವ ಬಾರೋ ಒಲವೇ ವಿಸ್ಮಯDownload Mungaru Male Lyrics Back to Menu
kunidu kunidu baare olidu olidu baare kuniva ninna mele maleya haniya maale jeevake jeeva thandavale jeevakkintha saniha baare olave vismaya olave vismaya ninna prema roopa kandu naanu thanmaya huchhu huduga neenu bichhi helalenu jeevake rekke thandavane banigeri haaruva baaro olave vismaya irulalli neenello maimuridare nanagilli naviraada hoo kampana kannalli nee kannittu bara seledare mathilla katheyilla bari romanchana ninna kanna thumba irali nanna bimba hoovige banna thandavane parimaladalli araluva baaro olave vismaya olave neenolida kshanadindale ee bhoomi ee bhanu hosadaagide khushiyinda ee manavella hoovagide berenu bekilla neenallade kunidu kunidu baare olidu olidu baare jeevake jeeva thandavale jeevakkintha saniha baare olave vismaya olave vismaya ninna prema roopa kandu naanu thanmaya huchhu huduga neenu bichhi helalenu jeevake rekke thandavane banigeri haaruva baaro olave vismayaDownload Mungaru Male Lyrics Back to Menu
ಇವನು ಗೆಳೆಯನಲ್ಲ ಗೆಳತಿ ನಾನು ಮೊದಲೇ ಅಲ್ಲ ಇವನು ಇನಿಯನಲ್ಲ ತುಂಬ ಸನಿಹ ಬಂದಿಹನಲ್ಲ ನೋವಿನಲ್ಲೂ ನಗುತಿಹನಲ್ಲ ಯಾಕೆ ಈ ಥರ ಜಾಣ ಮನವೇ ಕೇಳು ಜಾರಬೇಡ ಇವನ ಕಡೆಗೆ ಯಾಕೆ ನಿನಗೆ ಸಲ್ಲದ ಸಲಿಗೆ ಇರಲಿ ಅಂತರ ಇವನು ಗೆಳೆಯನಲ್ಲ ಗೆಳತಿ ನಾನು ಮೊದಲೇ ಅಲ್ಲ ಒಲವ ಹಾದಿಯಲ್ಲಿ ಇವನು ನನಗೆ ಹೂವು ಮುಳ್ಳು ಮನದ ಕಡಲಿನಲ್ಲಿ ಇವನು ಅಲೆಯೋ ಭೀಕರ ಸುಳಿಯೋ ಅರಿಯದಂಥ ಹೊಸ ಕಂಪನವೋ ಯಾಕೋ ಕಾಣೇನೂ ಅರಿತು ಮರೆತು ಜೀವ ವಾಲದಂತೆ ಇವನ ಕಡೆಗೆ ಸಾಲದಂತೆ ಕಾಯೆ ಮನವೇ ಉಳಿಸು ನನ್ನನು ಇವನು ಗೆಳೆಯನಲ್ಲ ಗೆಳತಿ ನಾನು ಮೊದಲೇ ಅಲ್ಲ ತಿಳಿದು ತಿಳಿದು ಇವನು ತನ್ನ ತಾನೇ ಸುಡುತಿಹನಲ್ಲ ಒಲುಮೆಎಂಬ ಸುಲಿಗೆ ಈಜು ಬರದೇ ಇಳಿದಿಹನಲ್ಲ ಸಾವಿನಲ್ಲೂ ನಗುವುದ ಬಲ್ಲ ಏನೋ ಕಳವಳ ಮುಳುಗುವವನ ಕೂಗು ಚಾಚುವಂತೆ ಮಾಡಿದೆ ಕೈಯ ಜಾರಿ ಬಿಡುವುದೇ ಈ ಹೃದಯ ಏನೋ ತಳಮಳ ಇವನು ಗೆಳೆಯನಲ್ಲ ಗೆಳತಿ ನಾನು ಮೊದಲೇ ಅಲ್ಲDownload Mungaru Male Lyrics Back to Menu
ivanu geleyanalla gelathi naanu modale alla ivanu iniyanalla thumba saniha bandihanalla novinallu naguthihanalla yaake ee thara jaana manave keelu jarabeda ivana kadege yaake ninage sallada salige irali anthara ivanu geleyanalla gelathi naanu modale alla olava haadiyalli ivanu nanage hoovu mullu manada kadalinalli ivanu aleyo bheekara suliyo ariyadantha hosa kampanavo yaako kaanenoo arithu marethu jeevavaaladanthe ivana kadege soladanthe kaaye manave ulisu nannanu ivanu geleyanalla gelathi naanu modale alla tilidu tilidu ivanu tanna thane suduthihanalla olumeyemba sulige eeju barade ilidihanalla saavinallu naguvuda balla eno kalavala muluguvavana koogu chachuvanthe maadide kaiya jaari biduvude ee hrudaya eno thalamala ivanu geleyanalla gelathi naanu modale allaDownload Mungaru Male Lyrics Back to Menu
ಅನಿಸುತಿದೆ ಯಾಕೋ ಇಂದು ನೀನೇನೆ ನನ್ನವಳೆಂದು ಮಾಯದ ಲೋಕದಿಂದ ನನಗಾಗೆ ಬಂದವಳೆಂದು ಆಹಾ ಎಂಥ ಮಧುರ ಯಾತನೆ ಕೊಲ್ಲು ಹುಡುಗಿ ಒಮ್ಮೆ ನನ್ನ ಹಾಗೆ ಸುಮ್ಮನೆ ಅನಿಸುತಿದೆ ಯಾಕೋ ಇಂದು ಸುರಿಯುವ ಸೋನೆಯು ಸೂಸಿದೆ ನಿನ್ನದೆ ಪರಿಮಳ ಇನ್ಯಾರ ಕನಸಲೋ ನೀನು ಹೋದರೆ ತಳಮಳ ಪೂರ್ಣ ಚಂದಿರ ರಜಾ ಹಾಕಿದ ನಿನ್ನಯ ಮೊಗವನು ಕಂಡ ಕ್ಷಣ ನಾ ಕೈದಿ ನೀನೆ ಸೆರೆಮನೆ ತಪ್ಪಿ ನನ್ನ ಒಪ್ಪಿಕೊ ಒಮ್ಮೆ ಹಾಗೆ ಸುಮ್ಮನೆ ಅನಿಸುತಿದೆ ಯಾಕೋ ಇಂದು ತುಟಿಗಳ ಹೂವಲಿ ಆಡದ ಮಾತಿನ ಸಿಹಿಯಿದೆ ಮನಸಿನ ಪುಟದಲಿ ಕೇವಲ ನಿನ್ನದೆ ಸಹಿಯಿದೆ ಹಣೆಯಲಿ ಬರೆಯದ ನಿನ್ನ ಹೆಸರ ಹೃದಯದಿ ನಾನೇ ಕೊರೆದಿರುವೆ ನಿನಗುಂಟೆ ಇದರ ಕಲ್ಪನೆ ನನ್ನ ಹೆಸರ ಕೂಗೆ ಒಮ್ಮೆ ಹಾಗೆ ಸುಮ್ಮನೆ ಅನಿಸುತಿದೆ ಯಾಕೋ ಇಂದು ನೀನೇನೆ ನನ್ನವಳೆಂದು ಮಾಯದ ಲೋಕದಿಂದ ನನಗಾಗೆ ಬಂದವಳೆಂದು ಆಹಾ ಎಂಥ ಮಧುರ ಯಾತನೆ ಕೊಲ್ಲು ಹುಡುಗಿ ಒಮ್ಮೆ ನನ್ನ ಹಾಗೆ ಸುಮ್ಮನೆ ಅನಿಸುತಿದೆ ಯಾಕೋ ಇಂದುDownload Mungaru Male Lyrics Back to Menu
Anisuthide yaako indu neenene nannavalendu mayada lokadinda nanagaage bandavalendu aha entha madhura yaathane kollu hudugi omme nannaa haage summane anisuthide yaako indu suriyuva soneyu sooside ninnade parimala inyara kanasalo neenu hodare thalamala poorna chandira raja haakida ninnaya mogavanu kanda kshana naa kaidi neene seremane thappi nanna oppiko omme haage summane anisuthide yaako indu thutigala hoovalli adada mathina sihiyide manasina putadali kevala ninnade sahiyide haneyali bareyada ninna hesara hrudayadi naane korediruve ninagunte edara kalpane nanna hesara kooge omme haage summane anisuthide yaako indu neenene nannavalendu mayada lokadinda nanagaage bandavalendu aha entha madhura yaathane kollu hudugi omme nannaa haage summane anisuthide yaako induDownload Mungaru Male Lyrics Back to Menu