ಕಾಣದ ಕಡಲಿಗೆ

ಕಾಣದ  ಕಡಲಿಗೆ  ಹಂಬಲಿಸಿದೆ  ಮನ 
ಕಾಣದ  ಕಡಲಿಗೆ  ಹಂಬಲಿಸಿದೆ  ಮನ  ಮನ ...

ಕಾಣದ  ಕಡಲಿಗೆ  ಹಂಬಲಿಸಿದೆ  ಮನ 
ಕಾಣದ  ಕಡಲಿಗೆ  ಹಂಬಲಿಸಿದೆ  ಮನ  
ಕಾಣಬಲ್ಲೆನೇ  ಒಂದು  ದಿನ , ಕಡಲನು  ಕೂಡಬಲ್ಲೆನೇ  ಒಂದು  ದಿನ 
ಕಾಣಬಲ್ಲೆನೇ  ಒಂದು  ದಿನ , ಕಡಲನು  ಕೂಡಬಲ್ಲೆನೇ  ಒಂದು  ದಿನ 
ಕಾಣದ  ಕಡಲಿಗೆ  ಹಂಬಲಿಸಿದೆ  ಮನ 

ಕಾಣದ  ಕಡಲಿನ  ಮೊರೆತದ  ಜೋಗುಳ  ಒಳಗಿವಿಗಿಂದು  ಕೇಳುತಿದೆ 
ಕಾಣದ  ಕಡಲಿನ  ಮೊರೆತದ  ಜೋಗುಳ  ಒಳಗಿವಿಗಿಂದು  ಕೇಳುತಿದೆ
ನನ್ನ  ಕಲ್ಪನೆಯು  ತನ್ನ  ಕಡಲನೇ  ಚಿತ್ರಿಸಿ  ಚಿಂತಿಸಿ  ಸುಯ್ಯುತಿದೆ 
ಎಲ್ಲಿರುವುದೋ  ಅದು ... ಎಂತಿರುವುದೋ  ಅದು  ...
ನೋಡಬಲ್ಲೆನೇ  ಒಂದು  ದಿನ , ಕಡಲನು  ಕೂಡಬಲ್ಲೆನೇ  ಒಂದು  ದಿನ  
ಕಾಣದ  ಕಡಲಿಗೆ  ಹಂಬಲಿಸಿದೆ  ಮನ 

ಸಾವಿರ  ಹೊಳೆಗಳು  ತುಂಬಿ  ಹರಿದರೂ  ಒಂದೇ  ಸಮನಾಗಿಹುದಂತೆ 
ಸಾವಿರ  ಹೊಳೆಗಳು  ತುಂಬಿ  ಹರಿದರೂ  ಒಂದೇ  ಸಮನಾಗಿಹುದಂತೆ 
ಸುನೀಲ  ವಿಸ್ತರ ತರಂಗ  ಶೋಭಿತ ಗಂಭೀರಾಂಭುಧಿ ತಾನಂತೆ
ಮುನ್ನೀರಂತೆ  ಅಪಾರವಂತೆ  ಕಾಣಬಲ್ಲೆನೇ  ಒಂದು  ದಿನ  ಅದರೊಳು, ಕರಾಗಲಾರೆನೇ  ಒಂದು  ದಿನ  
ಕಾಣದ  ಕಡಲಿಗೆ  ಹಂಬಲಿಸಿದೆ  ಮನ 

ಜಟಿಲ  ಕಾನನದ  ಕುಟಿಲ  ಪಥಗಳಲಿ  ಹರಿವ  ತೊರೆಯು  ನಾನು 
ಎಂದಿಗಾದರೂ , ಎಂದಿಗಾದರೂ , ಎಂದಿಗಾದರೂ  ಕಾಣದ  ಕಡಲನು  ಸೇರಬಲ್ಲೆನೇನು 
ಜಟಿಲ  ಕಾನನದ  ಕುಟಿಲ  ಪಥಗಳಲಿ  ಹರಿವ  ತೊರೆಯು  ನಾನು 
ಎಂದಿಗಾದರೂ  ಕಾಣದ  ಕಡಲನು  ಸೇರಬಲ್ಲೆನೇನು 
ಸೇರಬಹುದೇ  ನಾನು  ಕಡಲ  ನೀರಿನೊಳು  ಕರಗಬಹುದೇ  ನಾನು 
ಕರಗಬಹುದೇ  ನಾನು , ಕರಗಬಹುದೇ  ನಾನು 

Download kanada kadalige LyricsBack to Menu

c ahwath : kaanada kadalige , Lyrics- English

kaanada kadalige hambaliside mana
kaanada kadalige hambaliside mana mana...

kaanada kadalige hambaliside mana
kaanada kadalige hambaliside mana 
kaanaballene ondu dina, kadalanu koodaballene ondu dina
kaanaballene ondu dina, kadalanu koodaballene ondu dina
kaanada kadalige hambaliside mana

kanada kadalina morethada jogula holagivigindu keluthide
kanada kadalina morethada jogula holagivigindu keluthide
nanna kalpaneyu thanna kadalane chithrisi chinthisi suyyuthide
elliruvudo adu... enthiruvudo adu ...
nodaballene ondu dina, kadalanu koodaballene ondu dina 
kaanada kadalige hambaliside mana

saavira holegalu thumbi haridaru onde samanagihudanthe
saavira holegalu thumbi haridaru onde samanagihudanthe
suneela visthara tharanga shobitha gambirambhudhi thananthe
munneeranthe apaaravanthe kanaballene ondu dina adrolu, karagalaarene ondu dina
kaanada kadalige hambaliside mana

jatila kaananada kutila pathagalali hariva thoreyu naanu
endigadaru, endigadaru, endigadaru kaanada kadalanu seraballenenu
jatila kaananada kutila pathagalali hariva thoreyu naanu
endigadaru kaanada kadalanu seraballenenu
seerabahude naanu kadala neerinolu karagabahude naanu
karagabahude naanu, karagabahude naanu

Download kanada kadalige LyricsBack to Menu